ಮೂಲ ಕೃತಿ ರಚನೆಕಾರನ ಬೇಡಿಕೆ ಕೇವಲ ಪ್ರಥಮ ಬಾರಿಗೆ ಇರುತ್ತದೆ. ತದ ನಂತರ ಅಚ್ಚು ಹಾಕುವವನ
ಕೆಲಸ. ಒಂದು ಮೂಲ ಕೃತಿ ಮಾಡಿಸಲು ಒಂದು ಸಾವಿರ ರೂಪಾಯಿ ವೆಚ್ಚ ತಗುಲಿದರೆ ಅದೇ
ಮಾದರಿಯ ಅಚ್ಚು ಗೊಂಬೆ ಮಾರುಕಟ್ಟೆಯಲ್ಲಿ ಐವತ್ತು ರೂಪಾಯಿಗೆ ದೊರೆಯುತ್ತದೆ.ಅಚ್ಚು ಗೊಂಬೆ
ಎಂದರೆ ಗುರುಗಳಿಗೆ ಬಲು ಕೋಪ. ಶಾಸ್ತ್ರೋಕ್ತವಾಗಿ ತಯಾರಿಸಿದ ಕಾಷ್ಠ ಶಿಲ್ಪ, ಶಿಲಾ ಶಿಲ್ಪವೆಂದರೆ
ಗುರುಗಳಿಗೆ ಬಲು ಅಚ್ಚು ಮೆಚ್ಚು.
ಗುರುಗಳ ಸಂಗ್ರಹದಲ್ಲಿ ಮುಖ್ಯವಾದುದು ಮುತ್ತುಸ್ವಾಮಿ ದೀಕ್ಷಿತರ ಶಿವಾನಿ ಮರದ ೩ ಆಯಾಮ ಶಿಲ್ಪ,
ಅಭಿಮಾನಿಗಳು ಕೊಡುಗೆ ಕೊಟ್ಟ ಪುರಂದರ ದಾಸರ, ತ್ಯಾಗರಾಜರ ಅಮೃತಶಿಲೆಯ ಮೂರ್ತಿಗಳು.
ಇವರ ಸಂಗ್ರಹದಲ್ಲಿರುವ ತ್ಯಾಗರಾಜರ ಚಿತ್ರಕಲೆಗಳು ಅಮೂಲ್ಯ.ಹಲವಾರು ಕಲಾವಿದರ ಸಹವಾಸವಿರುವ
ನಮ್ಮ ಗುರುಗಳಿಗೆ ಒಮ್ಮೆ ನೋಡಿದರೆ ಕಲಾ ಕೃತಿಯ ಲೋಪದೋಶವೆಲ್ಲ ಅಳೆಯುವ ಅಪಾರ
ಜ್ಞಾನವಿದೆ.ತಾವು ಪಾಠ ಮಾಡುವಾಗ ಶಿಲೆಯಲ್ಲಿ ಅರಳಿಸುವ ಕುಸುರಿಯನ್ನು ಉದಾಹರಣೆ ಕೊಟ್ಟು
ಕೃತಿಯನ್ನು ಸುಲಭವಾಗಿ ಶಿಷ್ಯರಿಗೆ ಅರ್ಥ ಆಗುವಂತೆ ವಿವರಿಸುತ್ತಿದ್ದರು.ಇಂಥ ಗುರುಗಳ ಬಳಿಯಲ್ಲಿ
ವಿದ್ಯೆ ಕಲಿಯುವ ಪ್ರತಿಯೊಬ್ಬ ವಿದ್ಯಾರ್ಥಿಗಳೂ ಧನ್ಯರು, ಜೀವನ್ಮುಕ್ತರು.