ಸೆಪ್ಟೆಂಬರ್ 1ರಂದು ಪೂಜ್ಯ ಗುರುಗಳಾದ ವಿದ್ವಾನ್ ಶೃಂಗೇರಿ ಹೆಚ್. ಎಸ್ ನಾಗರಾಜ್ ರವರು ತಮ್ಮ
ನೆಚ್ಚಿನ ಶಿಷ್ಯ ವಿದ್ವಾನ್ ಜೆ. ಎಸ್ ಶ್ರೀಕಂಠ ಭಟ್ ರವರ ಚೊಚ್ಚಲ ಧ್ವನಿ ಮುದ್ರಣವನ್ನು ಲೋಕಾರ್ಪಣ
ಮಾಡಿ ಹಿಂದೊಮ್ಮೆ ಕೊಂಡು ಓದು ಎನ್ನುವ ಮಾತು ಕೇಳಿ ಬರುತ್ತಿತ್ತು; ಆದರೆ ಈಗ ಕೊಂಡು ಕೇಳು ಎನ್ನ
ಬೇಕಾಗಿದೆ. ತಂತ್ರಜ್ಞಾನಗಳು ಹೆಚ್ಚಾದಂತೆಲ್ಲ ಅದರ ದುರ್ಬಳಕೆ ಹೆಚ್ಚಾಗುತ್ತಾ ಹೋಗುತ್ತದೆ. ಒಂದು
ಸಂಗೀತ ಧ್ವನಿ ಮುದ್ರಿಕೆ ಹೊರ ಬರುವಾಗ ಸಂಗೀತಗಾರ ಎಷ್ಟೆಲ್ಲ ಕಸರತ್ತು ಸಾಧನೆ ಮಾಡಿರುತ್ತಾನೆ
ಅದೇ ಸಂಗೀತವನ್ನು ತಂತ್ರಜ್ಞಾನ ಬಳಸಿ ನಕಲು ಮಾಡಿ ಕೇಳುವ ಹವ್ಯಾಸ ಎಷ್ಟೊಂದು ಸುಲಭ ಎಂದರು.
ಶಿಷ್ಯರ ಪ್ರಯತ್ನವನ್ನು ಬಹುವಾಗಿ ಮೆಚ್ಚುವ ಗುರುಗಳು ಮೆಚ್ಚುಗೆಯ ಮಾತನಾಡಿದರು. ಕಲಿಕಾ
ದೃಷ್ಟಿಯಿಂದಲೂ ಈ ದ್ವನಿಮುದ್ರಿಕೆ ಬಹುಪಯೋಗಿ ಎಂದರು.
ಈ ಕುರಿತು ನಾವಿಕ ದಿನ ಪತ್ರಿಕೆಯ ವರದಿ ನೋಡಿ -