ನಮ್ಮ ಗುರುಗಳ ಕನಸು

ಸ್ನೇಹಿತರೇ,

ಕಳೆದ ಕೆಲ ಮಾಸಗಳು ನಾನು ಸೇರಿಕೊಂಡ ಹೊಸ ಕಂಪನಿಯ ಕೆಲಸದ ಗಡಿಬಿಡಿಯಲ್ಲಿ ಬ್ಲಾಗ್ನತ್ತ  ಗಮನ

ಹರಿಸುವುದು ಕಷ್ಟವಾಯಿತು ಇದರ ಬಗ್ಗೆ ಆಳವಾದ ಕೊರಗೊಂದಿತ್ತು. ಜೊತೆಯಲ್ಲಿ ಬ್ಲಾಗ್

ನೋಡಿದವರ್ಯಾರು ಒಂದು ಸಣ್ಣ ಪ್ರತಿಕ್ರಿಯೇನೂ ಕೊಡದೆ ಹೋದ ಕಾರಣ ಏನೋ ಒಂದು

ರೀತಿ ಮನಸಿತ್ತು. ಮೊನ್ನೆ ಮಾರ್ಚ್ ೪ಕ್ಕೆ ಬಹಳ ದಿನಗಳ ನಂತರ ಬ್ಲಾಗ್ ಓಪನ್ ಮಾಡಿದಾಗ ನಮ್ಮ

ಗುರುಗಳು ಈ ಬ್ಲಾಗ್ ನೋಡಿದರು ಅವ್ರು ಈ ಬ್ಲಾಗ್ ಓಪನ್ ಮಾಡಿದವರು ಯಾರು ಅಂತ ತಿಳಿಯೋದಕ್ಕೆ

ಉತ್ಸುಕರಾಗಿದ್ದಾರೆ ಅಂತ ತಿಳಿದು ಬಂತು. ಅಬ್ಬ!!! ನಾನು ಧನ್ಯನಾದೇ ಅನ್ನಿಸ್ತು +:-).

ಹೇಗಾದ್ರು ಮಾಡಿ ಬ್ಲಾಗ್ ಪ್ರಕಟಣೆ ಮುಂದುವರಿಸಬೇಕು ಅಂತ ತೀರ್ಮಾನ ಮಾಡಿದೆ. ತತ್ಕ್ಷಣ ಮನೆಗೆ ಲೋಕಲ್
ಇಂಟರ್ನೆಟ್ ಹಾಕಿಸಿ ಇದೋ ಶುರು ಮಾಡ್ಕೊಂಡೆ.

ಇದು ಒಂತರ ವಿಚಿತ್ರ ಅನ್ಸತ್ತೆ; ಮನುಷ್ಯನ ಆಸೆಗೆ ಮಿತಿನೇ ಇಲ್ಲ ಅಂತಾರೆ, ನಮ್ಮ ಗುರುಗಳಿಗೂ ಒಂದು ರೀತಿಯ

 ಅತಿ ಆಸೆ!!!, ಅದೇನು ಗೊತ್ತಾ? 

ಇದು ಹಿಂದೆಂದೋ ಮಹಾ ಮಹಾ ಗುರುಗಳು ಕಂಡ ಕನಸೋ ಅಥವಾ ನಮ್ಮ ಗುರುಗಳ ಒಬ್ಬರದೇ ಕನಸೋ

ತಿಳಿಯದು. ನಿಜ ಇದರಲ್ಲಿ ಅತಿಶಯೋಕ್ತಿಯೇನು ಇಲ್ಲ.

ಒಂದು ವಿಶ್ವ ಸಂಗೀತ ಗುರುಕುಲ ಕಟ್ಟ ಬೇಕು, ಅದರಲ್ಲಿ ಪ್ರಪಂಚದ ಎಲ್ಲ ರೀತಿಯ ಶಾಸ್ತ್ರೀಯ

ಸಂಗೀತವನ್ನೂ ಕಲಿಸಬೇಕು, ಸಂಗೀತದ ಬಗ್ಗೆ ಸಂಶೋಧನೆ ನಡೆಸಬೇಕು, ಪರ ದೇಶಗಳಿಂದ

ವಿದ್ಯಾರ್ಥಿಗಳು ಇಲ್ಲಿ ಬಂದು ಸಂಗೀತ ಕಲಿಯಬೇಕು, ಪ್ರಪಂಚದ ಎಲ್ಲ ಬಗೆಯ ವಾದ್ಯ ಸಂಗೀತವನ್ನೂ

ಅಲ್ಲಿ ಪಾಠ ಹೇಳಬೇಕು, ಅಬ್ಭಾಬ್ಭಾಬ್ಭಾಬ್ಬಾ ಏನ್ರೀ ಈ ಕನಸು.. ಈ ದುರಾಸೆ.....

ಪ್ರಪಂಚದಲ್ಲೆಲ್ರಿಗೂ ಉಪಯೋಗ ಆಗ್ಬೇಕು ಅಂತ ಈ ಮಹಾನುಭಾವ ಅತಿ ಆಸೆ ಪಡ್ತಿದ್ದಾರೆ. ಆದ್ರೆ ಏನ್ಮಾಡ್ತೀರ,

ಇದೆಲ್ಲ ಕೇಳಿದವರು ಹರಿ ಕಥೆ ಥರ ಕೇಳಿ 'ಈ ಮೇಸ್ಟ್ರು ಸಂಗೀತಕ್ಕಾಗಿ ಸಿಕ್ಕಾಪಟ್ಟೆ ಸೇವೆ ಮಾಡ್ತಾರಪ್ಪ'

ಅಂದ್ಕೊಂಡು ಸುಮ್ನಾಗ್ತಾರೆಯೇ ಹೊರತು 'ನಾವೂ ನಿಮ್ಮ ಜೊತೆ ಇದ್ದೀವಿ ಯೋಚಿಸಬೇಡಿ' ಅನ್ನೋವ್ರು ಕೇವಲ

ಶಿಷ್ಯರು ಮಾತ್ರ. ನಮ್ಮ ಮನೆ ಮಕ್ಕಳು coke , ಮಾಜ ಪೆಪ್ಸಿ  ಕುಡಿಯೋ ದುಡ್ಡು, ಸಿನಿಮಾ ನೋಡೋಕೆ

ಸುರಿಯೋ ದುಡ್ಡು, ದಿನಾ ಸಂಜೆ ಎಂಜಲು ಪಾನಿ ಪೂರಿ ತಿನ್ನೋ ದುಡ್ಡು  ಬರ್ತ್ಡೇ ಪಾರ್ಟಿಯಲ್ಲಿ ಮಾಡೋ

ಅನವಸರವಾದ ಖರ್ಚು ಉಳಿಸಿ ಈ ಸಂಗೀತ ಗುರುವಿಗೆ ಕೊಟ್ರೆ ನಮ್ಮ ಮಕ್ಕಳು ತಿಂದು ತೇಗುವ ವ್ಯರ್ಥ ಮಾಡುವ

ಹಣಕ್ಕೆ ಒಂದು ಅರ್ಥ ಸಿಗೊಲ್ವೇನ್ರೀ ????

ಅಷ್ಟಕ್ಕೂ ಈ ಗುರುವೇನು ಯಾರ ದುಡ್ಡಿಗಾಗಿ ಕಾಡು ಕುಳಿತು ತಮ್ಮ ಕನಸು ಕೈ ಬಿಟ್ಟಿಲ್ಲ. ನೋಡ್ತಾ ಇರ್ರೀ 

ಹೇಗಾದರು ಮಾಡಿ ಕಷ್ಟ ಪಟ್ಟು ತಮ್ಮ ದುರಾಸೆ, ಕನಸು ಈದೆರ್ಸಿಕೊಲ್ದೆ ಇರ್ರಲ್ಲ ಈ ಛಲದಂಕ ಮಲ್ಲ.

ಆದರೂ ಅವರ ಕನಸಿನ ಗುರುಕುಲದ ಬಗ್ಗೆ ಅವರ ಬಾಯಲ್ಲೇ ಕೇಳೋದು ಚಂದಾರಿ..... ಅವರು ಅದರ ಬಗ್ಗೆ ಹೇಳ್ತಾ 

ಹೇಳ್ತಾ ಆ ಕನಸಿನ ಗುರುಕುಲಕ್ಕೆ ನಮ್ಮನ್ನ ಕರ್ಕೊಂಡು ಹೋಗ್ಬಿಡ್ತಾರೆ. ಬನ್ನಿ ಅವರ ಕನಸನ್ನು ನನಸಾಗಿಸೋಣ......

ವಿಶ್ವಕ್ಕೊಂದು ದೊಡ್ಡ ಉಡುಗೊರೆ ನೀಡೋಣ. ಎಲ್ಲೆಲ್ಲೋ ಹೋಗಿ ಸಂಗೀತ ಕಲಿಯೋ ಅವಶ್ಯಕತೆನೆe ಇಲ್ಲ.

ನಮ್ಮ ಊರಲ್ಲೇ ನಮ್ಮ ಜಿಲ್ಲೆಯಲ್ಲೇ ವಿಶ್ವದ ಸೂಪರ್ speciality ಸಂಗೀತ ಗುರುಕುಲ ನಮ್ಮದಾಗಿಸಿಕೊಳ್ಳೋಣ....

ಹೇಗಿರಬಹುದು ನಮ್ಮ ಗುರುಗಳ ಕನಸಿನ ಗುರುಕುಲ?????


ಹೀಗಾ -