ಗುರುಗಳ ಧ್ವನಿ ಕೇಳಿದವರೆಲ್ಲ 'ಇವರ ಧ್ವನಿ ಬಾಲಮುರಳಿಯವರ ಧ್ವನಿಯಂತಿದೆ' ಎನ್ನುತ್ತಾರೆ;
ಆದರೆ ಗುರುಗಳ ಶೈಲಿ ಬೇರೆ; ಗುರುಗಳು ಎಂದಿಗೂ ಇದನ್ನು ಹೇಳುತ್ತಿರುತ್ತಾರೆ.
ಗುರುಗಳಿಗೆ ಬಾಲಮುರಳಿ ಕೃಷ್ಣನ್ ರವರ ಸಂಗೀತ ಎಂದರೆ ಬಲು ಅಚ್ಚು ಮೆಚ್ಚು.ಕರ್ನಾಟಕ ಸಂಗೀತದ "ಗಾನ ಗಂಧರ್ವ", ಶ್ರೀ ಮಂಗಳಪಲ್ಲಿ ಡಾ. ಬಾಲಮುರಳಿಕೃಷ್ಣರವರು ೭೯ರ ತರುಣತೆಗೆ ಅಡಿಯಿಟ್ಟಿದ್ದಾರೆ.ಇವರ ಮೊದಲ ಸಭಾಗಾನ ಇವರ ೧೫ನೆ ವಯಸ್ಸಿನಲ್ಲಿ ಅವರ ಹುಟ್ಟೂರಾದ ಶಂಕರಗುಪ್ತಂನಲ್ಲಿ ನಡೆಯಿತು. ಅದರ ನಂತರ ಅವರೆಂದೂ ಹಿಂತಿರುಗಿ ನೋಡಲೇ ಇಲ್ಲ.ಶ್ರೀವರ್ಯರಿಗೆ ಅವರ ಹುಟ್ಟೂರಿನ ಮೇಲೆ ಅಪಾರವಾದ ಅಭಿಮಾನ. ಪ್ರತಿ ದಿನ ಸೂರ್ಯೋದಯದ ಸಮಯದಲ್ಲಿ ಗೋದಾವರಿ ತೀರದಲ್ಲಿ ನಡೆಯುತ್ತಿತ್ತಂತೆ ಇವರ ಸಾಧನೆ. ಇಂತಹ ಮಹಾನ್ ಸಾಧಕರಿಗೆ ಫ್ರಾನ್ಸ್ ನ ಅತ್ಯುನ್ನತ ಪ್ರಶಸ್ತಿಯಾದ "ಚಾವ್ಲಿರ್", "ಪದ್ಮ ವಿಭೂಷಣ" ಇಂತಹ ಹತ್ತು ಹಲವು ಬಿರುದುಗಳು ಒಲಿದು ಬಂದಿವೆ. ಶ್ರೀಮಾನ್ಯರು ವಾಗ್ಗೆಯಕಾರು; ಯಾರು ಸಾಹಿತ್ಯವನ್ನು ರಚಿಸಿ ಸ್ವರ ಸಂಯೋಜಿಸಿ ಹಾಡುತ್ತಾರೋ, ಅವರನ್ನು ವಾಗ್ಗೆಯಕಾರರೆನ್ನುತ್ತಾರೆ.
ಇವರ ರಚನೆಗಳಲ್ಲಿ ಮುಖವಾದುವುಗಳೆಂದರೆ ಕೃತಿ, ವರ್ಣ ಹಾಗೂ ತಿಲ್ಲಾನ.
ಕರ್ನಾಟಕ ಸಂಗೀತದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಈ ವೆಬ್ ಸೈಟ್ ನೋಡಿ.
ಅನ್ನಮಯ್ಯ ವಿರಚಿತ ಒಂದು ಕೃತಿಯನ್ನು ಶ್ರೀಯುತರ ಧ್ವನಿಯಲ್ಲಿ ಕೇಳಿ ಆನಂದಿಸಿ.